ಆಲ್ಬುಕರ್ಕ್ (ನ್ಯೂ ಮೆಕ್ಸಿಕೋ) ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯೂ ಮೆಕ್ಸಿಕೊ ಪ್ರಾಂತ್ಯದ ಅತ್ಯಂತ ದೊಡ್ಡನಗರ. ಸಮುದ್ರಮಟ್ಟಕ್ಕಿಂತ ೫೧೯೬’ ಎತ್ತರದಲ್ಲಿದೆ. ಪಟ್ಟಣದ ವಿಸ್ತೀರ್ಣ ೪೯೦.೯ಚದರ ಕಿ.ಮೀ ಜನಸಂಖ್ಯೆ ೯೦೨,೭೯೭ (೨೦೧೩) ವಾಯುಗುಣ ಹಾಗೂ ವೈದ್ಯಕೀಯ ಅನುಕೂಲತೆಗಳಿಂದ ಆರೋಗ್ಯಧಾಮವೆನಿಸಿದೆ. ರೈಲು ಹಾಗೂ ವಿಮಾನಗಳ ಸಂಪರ್ಕವುಂಟು. ಪಶುಪಾಲನೆ, ಗಣಿ ಕೈಗಾರಿಕೆ ಹಾಗೂ ಮರದ ಸಾಮಗ್ರಿಗಳ ಉದ್ಯಮ ಚೆನ್ನಾಗಿ ಬೆಳೆದಿದೆ. ಅಲ್ಲದೆ ಹತ್ತಿರದ ಇತರ ಪಟ್ಟಣಗಳಿಗೂ ಈ ಸಾಮಗ್ರಿಗಳ ಉದ್ಯಮ ಚನ್ನಾಗಿ ಬೆಳೆದಿದೆ. ಅಲ್ಲದೆ ಹತ್ತಿರದ ಇತರ ಪಟ್ಟಣಗಳಿಗೂ ಈ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಅನೇಕ ಬಗೆಯ ಯಂತ್ರೋಪಕರಣದ ಕೈಗಾರಿಕೆಗಳೂ ಇವೆ. ಇಲ್ಲಿ ನ್ಯೂ ಮೆಕ್ಸಿಕೊ ಒಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದೆ (೧೮೯೨). == ಬಾಹ್ಯ್ಸ ಸಂಪರ್ಕಗಳು == 1905 ಆಲ್ಬುಕರ್ಕ್ (ನ್ಯೂ ಮೆಕ್ಸಿಕೋ) ಓಪನ್ ಡೈರೆಕ್ಟರಿ ಪ್ರಾಜೆಕ್ಟ್ == ಉಲ್ಲೇಖಗಳು ==